ಅಬ್ರಹಾಮನ ದೇವರೇ ನಿನಗೆ ಆರಾಧನೆ

Abrahama devare ninage

Unknown

Writer/Singer

Unknown

ಅಬ್ರಹಾಮನ ದೇವರೇ ನಿನಗೆ ಆರಾಧನೆ
ಇಸಾಕನ ದೇವರೇ ನಿನಗೆ ಆರಾಧನೆ
ಯಾಕೋಬಿನ ದೇವರೇ ನಿನಗೆ -೨ ಆರಾಧನೆ ಆರಾಧನೆ
ತಂದೆ ಮಗನಿಗೆ ಪವಿತ್ರಾತ್ಮನಿಗೆ
ನಾ ಮಾಡುವೆ ಆರಾಧನೆ
ಅರಾಧನೆ - ಆರಾಧನೆ

1. ನಾನು ಸುಖವಾಗಿ ಬಾಳಬೇಕೆಂದು ನನ್ನನ್ನು ಸೃಷ್ಟಿಮಾಡಿದೆ
ನಾನು ನಿನ್ನ ಸ್ತುತಿಸಬೇಕೆಂದು ಹೆಸರಿಡಿದು ನೀ ಕರೆದೆ

ಕೃಪಾಪೂರ್ಣನೇ ಓ ಕೃಪಾಪೂರ್ಣನೇ
ಉಸಿರಿರುವ ದಿನವೆಲ್ಲಾ ನಾ ಮಾಡುವೆ ಆರಾಧನೆ
ಆರಾಧನೆ - ಆರಾಧನೆ

2. ಹೃದಯದ ತುಂಬಾ ನಿನ್ನ ಜ್ಞಾಪಕ ಅದನ್ನು ಬಿಟ್ಟರೆ ಬೇರೇನಿಲ್ಲಪ್ಪ
ಲೋಕವೆಲ್ಲಾ ಹುಡುಕಿ ನಾ ಬಂದೆ ಎಲ್ಲೂ ಸಿಗಲಿಲ್ಲ ನಿನ್ನಂಥಾ ತಂದೆ
ಕರುಣಾಮಯನೇ ಓ ಕರುಣಾಮಯನೇ
ಬದುಕಿರುವ ದಿನವೆಲ್ಲಾ ನೇಯಾ ಮಾಡುವೆ ಆರಾಧನೆ
ಆರಾಧನೆ - ಆರಾಧನೆ |