ಆರಾಧಿಸುವೆನು ಆತ್ಮದಿ ಸತ್ಯದಿ -

Aaradisuvenu

Kannada Christian Songs

Writer/Singer

Kannada Christian Songs

ಆರಾಧಿಸುವೆನು ಆತ್ಮದಿ ಸತ್ಯದಿ ಕೀರ್ತಿಸುವೆನುಹೃದಯಾಂತರಾಳದಿ
ನಿನ್ನನ್ನೇ ನನ್ ದೇವ ನಿನ್ನನ್ನೆ ನನ್ ದೇವಾ
ನಿನ್ನನ್ನೇ ನಾನರಾಧಿಸುವೆನು
ನಿನ್ನನ್ನೇ ಯೇಸಯ್ಯ ನಿನ್ನನ್ನೇ ಯೇಸಯ್ಯ ನಿನ್ನನ್ನೇ ನಾನರಾಧಿಸುವೆನು

1. ದಾಸತ್ವದಿಂದ ಬಿಡಿಸಿರುವೆ ನನ್ ಪಕ್ಷದಿ ಇರುವ ನೀನು ರೋಷವುಳ್ಳ ದೇವರು//2//
ವಿಶ್ರಾಂತಿ ದಿನವನ್ನು ಪರಿಶುದ್ಧ ಹೃದಯದಿ ಆಚರಿಸುವೆ
ದೀರ್ಘಾಯುಷ್ಯು ಹೊಂದಲು ತಂದೆ-ತಾಯಿಯ ಸನ್ಮಾನಿಸುವೆ //2//

2. ದೇವರನಾಮವನ್ನು ಅಯೋಗ್ಯ ಕಾರ್ಯಕ್ಕೆ ನುಡಿಯಲಾರೆನು
ಆತನ ಪ್ರೀತಿಗೆ ಪಾತ್ರನಾಗಿ ನಾ ಜೀವಿಸುವೆ /2/ ನರಹತ್ಯ ವ್ಯಭಿಚಾರವನು ಕಳ್ಳತನವನ್ನು ಮಾಡಲಾರೆನು
ಸುಳ್ಳು ಸಾಕ್ಷಿಯ ಹೇಳದೆ ಪರರ ಸೊತ್ತು ನಾ ಬಯೆಸೆನು //2//