ಎಲೀಯನ ದೇವರೇ ನಮ್ಮ ದೇವರು
ಮಹಿಮೆಯ ದೇವರೆ ನಮ್ಮ ದೇವರೂ
ಭತ್ತರೆಲ್ಲರಾ ಜಪಕೇಳಿ ಮಹಿಮೆಯ
ಕಾರ್ಯವ ಮಾಡುವನು
ಕರ್ತನೇ ದೇವರು ಕರ್ತನೇ ದೇವರು
ಎಂದೇ ಘೋಷಿಸುವಾ ( ಯೇಸುವೇ )
1.ಬೇಡಿದ ಭಕ್ತನ ಬಿನ್ನಹ ಕೇಳಿ
ಮಳೆಮಂಜು ನಿಲ್ಲಿಸಿದ ಮಹಿಮೆಯ ದೇವಾ
ಬರಗಾಲದೊಳ್ ವಿಧವೆ ಮನೆಯೊಳ್
ಮೊಗೆಯನ್ನು ತುಂಬಿ ಹರಿಯ ಮಾಡಿದ
ಕರ್ತನೆ ದೇವರು ಕರ್ತನೆ ದೇವರು
ಎಂದೇ ಘೋಷಿಸುವಾ ( ಯೇಸುವೇ )
2.ವೈರಿಗಳ ಎದಿರಲಿ ದೇವ ಮನುಷ್ಯ
ವೀರದಿಂದ ಮೊಳಗಿದ ದೇವ ಮನುಷ್ಯ
ದೇವನೇ ದೇವರೆಂದು ದೇವ ಮನುಷ್ಯ
ಪರಮಾಗ್ನಿಯ ಸುರಿಯ ಮಾಡಿದಾ
ಕರ್ತನೆ ದೇವರು ಕರ್ತನೆ ದೇವರು
ಎಂದೇ ಘೋಷಿಸುವಾ ( ಯೇಸುವೇ )
Eliyana devare nam’ma devaru
mahimeya devare nam’ma devaru
bhattarellara japakeḷi mahimeya
karyava maḍuvanu
kartane devaru kartane devaru
ende ghoṣisuva (yesuve)
1.beḍida bhaktana binnaha keḷi
maḷeman̄ju nillisida mahimeya deva
baragaladoḷ vidhave maneyoḷ
mogeyannu tumbi hariya maḍida
kartane devaru kartane devaru
ende ghoṣisuva (yesuve)
2.vairigaḷa edirali deva manuṣya
viradinda moḷagida deva manuṣya
devane devarendu deva manuṣya
paramagniya suriya maḍida
kartane devaru kartane devaru
ende ghoṣisuva (yesuve)