ಆರಾಧನೆ ದೇವಾ ಆರಾಧನೆ

Aradhane deva aradhane

Kannada Christian Song

Writer/Singer

Kannada Christian Song

ಆರಾಧನೆ ದೇವಾ ಆರಾಧನೆ
ಪ್ರಭು ಯೇಸು ಸ್ವಾಮಿಗೆ ಆರಾಧನೆ
ಲೋಕದ ಪಾಪಕ್ಕೆ ಪರಿಹಾರ ಬಲಿಯಾದ
ದೇವರ ಕುರಿಮರಿಗೆ ಆರಾಧನೆ
ಹಲ್ಲೆಲೂಯ ||4||

1.ಕಣ್ಣೀರ ಕಡಲಲ್ಲಿ ಮುಳುಗುವ ವೇಳೆಯಲ್ಲಿ
ಕರಹಿಡಿದ ಕರ್ತನಿಗೆ ಆರಾಧನೆ
ಸಂಕಟದ ಸಮಯದಲ್ಲಿ ಜೊತೆಗಿದ್ದು ರಕ್ಷಿಸಿದ
ಪರಮೋನ್ನತ ದೇವನಿಗೆ ಆರಾಧನೆ
ಹಲ್ಲೆಲೂಯ ||4|| ||ಆರಾಧನೆ||

2.ಪಾಪದ ಬೇರನ್ನು ನನ್ನಿಂದ ಕಿತ್ತೆಸೆದ
ಪಾಪ ವಿಮೋಚಕನೇ ಆರಾಧನೆ
ರೋಗದ ವೇದನೆಗೆ ಸೌಖ್ಯವ ನೀಡಿದ
ಆರೋಗ್ಯದಾಯಕನೇ ಆರಾಧನೆ
ಹಲ್ಲೆಲೂಯ ||4|| ||ಆರಾಧನೆ||

aradhane deva aradhane
prabhu yesu svamige aradhane
lokada papakke parihara baliyada
devara kurimarige aradhane
halleluya ||4||

1.kaṇṇira kaḍalalli muḷuguva veḷeyalli
karahiḍida kartanige aradhane
saṅkaṭada samayadalli jotegiddu rakṣisida
paramonnata devanige aradhane
halleluya ||4|| ||aradhane||

2.papada berannu nanninda kitteseda
papa vimocakane aradhane
rogada vedanege saukhyava niḍida
arogyadayakane aradhane
halleluya ||4|| ||aradhane||